ಯುರೀ, ಹೆರಾಲ್ಡ್ ಕ್ಲೇಟನ್
1893. ಅಮೆರಿಕ ಸಂಯುಕ್ತ ಸಂಸ್ಥಾನದ ರಸಾಯನ ವಿe್ಞÁನಿ; ನೊಬೆಲ್ ಪಾರಿತೋಷಕ ವಿಜೇತ, ಜನನ ಅಮೆರಿಕ ಸಂಯುಕ್ತ ಸಂಸ್ಥಾನದ ಇಂಡಿಯಾನ ರಾಜ್ಯದ ವಾಕರ್‍ಟನ್ ಎಂಬಲ್ಲಿ 1893 20 ಏಪ್ರಿಲ್ ರಂದು. ಈತನ ತಂದೆ ವೃತ್ತಿಯಲ್ಲಿ ಉಪಾಧ್ಯಾಯ. ತಂದೆಯ ಪ್ರೋತ್ಸಾಹದಿಂದ ಮಗನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಚೆನ್ನಾಗಿ ನಡೆಯಿತು. ಅನಂತರ ಈತ ಮಾಂಟಾನ್ ಸ್ಟೇಟ್ ವಿಶ್ವವಿದ್ಯಾಲಯ ಸೇರಿದ. ಪ್ರಾಣಿವಿe್ಞÁನವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು 1917ರಲ್ಲಿ ಸ್ನಾತಕನಾದ. ಮೊದಲನೆಯ ಮಹಾಯುದ್ಧ ನಡೆಯುತ್ತಿದ್ದ ಕಾಲವದು. ಸಹಜವಾಗಿಯೇ ಸಿಡಿಮದ್ದುಗಳ ಆಧ್ಯಯನಕ್ಕೆ ತೊಡಗಿದ. ಅನಂತರ ಇವನ ಗಮನವೆಲ್ಲ ರಸಾಯನವಿe್ಞÁನದೆಡೆಗೆ ಹರಿಯಿತು. ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯ ನೀಡಿದ ಶಿಷ್ಯವೇತನದಿಂದ ಅಮೆರಿಕದ ಮತ್ತೊಬ್ಬ ರಸಾಯನ ವಿe್ಞÁನಿ ಗಿಲ್ಬರ್ಟ್ ನ್ಯೂಟನ್ ಲೂಯಿ (1875 - 1946) ಎಂಬುವನ ಸಾಹಚರ್ಯದಲ್ಲಿ ಸಂಶೋಧನೆ ಮುಂದುವರಿಸಿ ಡಾಕ್ಟೊರೇಟ್ ಪದವಿ ಗಳಿಸಿದ. 1923ರಿಂದ ಒಂದು ವರ್ಷ ಕಾಲದ ತನಕ ಕೋಪನ್ ಹೇಗನ್ನಿನಲ್ಲಿ ಬಂದು ನೆಲೆಸಿದ. ಅಲ್ಲಿ ಭೌತವಿe್ಞÁನಿ ನೀಲ್ಸ್ ಬೋರ್‍ನ ಪ್ರಯೋಗಶಾಲೆಯಲ್ಲಿ ಕೆಲಸ ಮಾಡುವ ಸದವಕಾಶ ಇವನಿಗೆ ಒದಗಿತು. ಆ ಬಳಿಕ ಬಾಲ್ಟಿಮೋರಿನ ಜಾನ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪನ, ಅನಂತರ 1929-45ರ ಅವಧಿಯಲ್ಲಿ ಕೊಲಂಬಿಯ ವಿಶ್ವವಿದ್ಯಾಲಯದಲ್ಲೂ ನಂತರ 1952ರ ತನಕ ಷಿಕಾಗೋ ವಿಶ್ವವಿದ್ಯಾಲಯದಲ್ಲೂ ಅಧ್ಯಾಪನ ಮತ್ತು ಸಂಶೋಧನೆಗಳಲ್ಲಿ ನಿರತನಾದ. ಅಂತಿಮವಾಗಿ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ನೆಲೆ ನಿಂತ.

1931ರಲ್ಲಿ ಯುರೀ ಭಾರ ಹೈಡ್ರೊಜನ್ನಿನ ಸಮಸ್ಯೆಯನ್ನು ಕೈಗೆತ್ತಿಕೊಂಡ. ಇದಕ್ಕೆ ಮುಂಚೆ ಇಂಗ್ಲೆಂಡಿನಲ್ಲಿ ರಸಾಯನ ವಿe್ಞÁನಿ ಫ್ರೆಡರಿಕ್ ಸಾಡಿ (1877-1956) ತನ್ನ ಐಸೋಟೋಪ್ ವಾದವನ್ನು ಮಂಡಿಸಿದ್ದನಷ್ಟೆ. ಇದರಿಂದ ಪ್ರಭಾವಿತರಾದ ವಿe್ಞÁನಿಗಳು ಹೈಡ್ರೊಜನ್ ಧಾತುವೂ ಐಸೋಟೋಪುಗಳನ್ನು ಹೊಂದಿರಬಹುದು; ಸಾಮಾನ್ಯ ಹೈಡ್ರೊಜನ್ ಪರಮಾಣುಗಳಿಗಿಂತಲೂ ಎರಡು ಪಟ್ಟು ಭಾರವಾಗಿರುವ, ಆದರೆ ಅದರ ಎಲ್ಲ ರಾಸಾಯನಿಕ ಲಕ್ಷಣಗಳನ್ನೂ ಮೈಗೂಡಿಸಿಕೊಂಡಿರುವ ಪರಮಾಣುಗಳಿರುವುದು ಸಾಧ್ಯವೆಂದು ಸಲಹೆ ಮಾಡಿದ್ದರು. ಇದು ವಾಸ್ತವ ಎಂಬುದು ಈತನ ಪ್ರಯೋಗಗಳಿಂದ ಸ್ಥಿರಪಟ್ಟಿತು. ಆದರೆ ಸಾಮಾನ್ಯ ಹೈಡ್ರೋಜನ್ನಿನಲ್ಲಿ ಭಾರ ಹೈಡ್ರೊಜನ್ನಿನ ಅಂಶ ಅತ್ಯಲ್ಪ ಎಂಬುದೂ ಗೊತ್ತಾಯಿತು. 

ವಾಸ್ತವವಾಗಿ ಸಾಮಾನ್ಯ ಹೈಡ್ರೊಜನ್ನಿನ ಆವಿಯೊತ್ತಡ ಭಾರ ಹೈಡ್ರೊಜನ್ನಿನ ಆವಿಯೊತ್ತಡಕ್ಕಿಂತಲೂ ಅಧಿಕ. ದ್ರವ ಹೈಡ್ರೊಜನನ್ನು ಬಾಷ್ಟೀಕರಿಸಿದಾಗ ಹಗುರವಾದ, ಸಾಮಾನ್ಯ ಹೈಡ್ರೊಜನ್ನಿನ ಪರಮಾಣುಗಳು ಸರಾಗವಾಗಿ ಪಾರಾಗುತ್ತವೆ. ಉಳಿದ ದ್ರವದಲ್ಲಿ ಭಾರ ಹೈಡ್ರೊಜನ್ನಿನ ಪ್ರಮಾಣ ಏರುತ್ತದೆ. ಈ ಎರಡೂ ಬಗೆಯ ಹೈಡ್ರೊಜನ್ ಪರಮಾಣುಗಳಲ್ಲಿರುವುದು ಒಂದೇ ಎಲೆಕ್ಟ್ರಾನ್. ಆದರೆ ಭಾರ ಹೈಡ್ರೊಜನ್ನಿನ ನ್ಯೂಕ್ಲಿಯಸ್ಸಿನ ರಾಶಿ ಎರಡು ಪಟ್ಟು ಹೆಚ್ಚು. ಇದರ ಪರಿಣಾಮವಾಗಿ ಭಾರ ಹೈಡ್ರೊಜನ್ ಪರಮಾಣುಗಳಿರುವ ಎಲೆಕ್ಟ್ರಾನ್ ಶಕ್ತಿ ಮಟ್ಟಗಳು ಸಾಮಾನ್ಯ ಹೈಡ್ರೊಜನ್ ಪರಮಾಣುಗಳಲ್ಲಿರುವ ಎಲೆಕ್ಟ್ರಾನ್ ಶಕ್ತಿ ಮಟ್ಟಗಳು ಸಾಮಾನ್ಯ ಹೈಡ್ರೋಜನ್ ಪರಮಾಣುಗಳಲ್ಲಿರುವ ಎಲೆಕ್ಟ್ರಾನ್ ಶಕ್ತಿ ಮಟ್ಟಗಳಿಗಿಂತಲೂ ಭಿನ್ನ ಆಗಿರುತ್ತದೆ. ಅಂದರೆ ಕಾಸಿದಾಗ ಈ ಎಲೆಕ್ಟ್ರಾನ್ ಶಕ್ತಿ ಮಟ್ಟಗಳಲ್ಲಿ ಉಂಟಾಗುವ ಬದಲಾವಣೆಗಳೂ ಬೇರೆ ಬೇರೆ ಆಗಿರುತ್ತವೆ. ಹೀಗಾಗಿ ಇವುಗಳಿಂದ ಮೂಡುವ ರೋಹಿತ ರೇಖೆಗಳಲ್ಲೂ ವ್ಯತ್ಯಾಸ ಕಂಡುಬರಬೇಕು. ದ್ರವ ಹೈಡ್ರೊಜನನ್ನು ಬಾಷ್ಟೀಕರಿಸುತ್ತ ಹೋದ ಹಾಗೆಲ್ಲ ಒಂದು ಹಂತದಲ್ಲಿ ಉಳಿಯುವ ದ್ರವದಲ್ಲಿ ಭಾರ ಹೈಡ್ರೊಜನ್ನಿನ ಪ್ರಮಾಣ ಸಾಕಷ್ಟಿದ್ದು ಅವುಗಳ ಅಸ್ತಿತ್ವವನ್ನು ರೋಹಿತದರ್ಶನದಿಂದ ಗುರುತಿಸಲು ಸಾಧ್ಯವಾಗಬಹುದು. ಹೀಗೆ ಹರಿದಿತ್ತು ಈತನ ವಿಚಾರಧಾರೆ.

ಪ್ರಯೋಗಶೀಲನಾದ ಈತನ ಕೇವಲ ಊಹಾಪೋಹಗಳಿಂದ ತೃಪ್ತನಾಗದೆ ಕಾರ್ಯೋದ್ಯುಕ್ತನಾದ. ನಾಲ್ಕು ಲೀಟರ್‍ಗಳಷ್ಟು ದ್ರವ ಹೈಡ್ರೊಜನನ್ನು ಹಂತ ಹಂತವಾಗಿ, ನಿಧಾನವಾಗಿ ಬಾಷ್ಟೀಕರಿಸುತ್ತ ಬರಲು ಒಂದು ಘನ ಮೀಟರಿನಷ್ಟು (ಅಂದರೆ ಮೂಲ ದ್ರವದ ಗಾತ್ರದ 1/4000 ಭಾಗ) ದ್ರವ ಉಳಿಯಿತು. ಅದರ ರೋಹಿತವನ್ನು ಪರೀಕ್ಷಿಸಿದಾಗ ಸಾಮಾನ್ಯ ಹೈಡ್ರೊಜನ್‍ನ ಅಸ್ಪಷ್ಟ ರೇಖೆಗಳು ನಿರೀಕ್ಷಿತ ಸ್ಥಾನಗಳಲ್ಲಿದ್ದದ್ದು ಕಂಡುಬಂದಿತು. ಹೀಗೆ ಭಾರ ಹೈಡ್ರೊಜನ್‍ನ ಅಸ್ತಿತ್ವ ಸ್ಥಿರಪಟ್ಟಿತು. ಇದಕ್ಕೆ ಡ್ಯೂಟೀರಿಯಮ್ ಎಂದು ಹೆಸರಿಡಲಾಯಿತು. ಹೈಡ್ರೊಜನ್ ಇರುವುದಾದರೆ ಅದನ್ನು ಒಳಗೊಂಡ ಭಾರಜಲವಿರಬೇಕಷ್ಟೆ. ಇದನ್ನು ತಯಾರಿಸಿದ ಕೀರ್ತಿಗೆ ಲೂಯಿ ಭಾಜನನಾದ. ಭಾರ ಹೈಡ್ರೊಜನನ್ನುಳ್ಳ ಆಹಾರವನ್ನು ಪ್ರಾಣಿಗಳಿಗೆ ಉಣಿಸಿದಾಗ ಅವುಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಜೀವರಸಾಯನಿಕ ಕ್ರಿಯೆಗಳ ಗತಿಯನ್ನು ಗುರುತಿಸುವ ವಿಧಾನವನ್ನು ಮೊದಲು ಪ್ರಸ್ತುತಪಡಿಸಿದವ ಜರ್ಮನ್- ಅಮೆರಿಕನ್ ಜೀವವಿe್ಞÁನಿ ಷರ್ನ್‍ಹೈಮರ್ (1898-1941). ಯುರೇನಿಯಮ್-235 ಪರಮಾಣು ಬೀಜದ ವಿದಳನದಲ್ಲಿ ಪಾತ್ರವಹಿಸುವ ನ್ಯೂಟ್ರಾನುಗಳ ವೇಗ ಒಂದು ಮಿತಿಯಲ್ಲಿರಬೇಕು. ಅದು ವ್ಯತ್ಯಾಸಗೊಳ್ಳಬಾರದು. ಹೀಗಿದ್ದರೆ ಮಾತ್ರ  ಪರಮಾಣುಗಳು ವಿದಳನ ಹೊಂದಿ ಅಪಾರ ಶಕ್ತಿಯನ್ನು ಹೊರಗೆಡುಹುತ್ತವೆ. ನ್ಯೂಟ್ರಾನುಗಳ ವೇಗ ನಿಯಂತ್ರಣಕ್ಕೆ ಬಳಸುವ ಪದಾರ್ಥಗಳ ಪೈಕಿ ಭಾರಜಲವೂ ಒಂದು. 

ಭಾರಹೈಡ್ರೊಜನ್ನಿನ ಶೋಧ ವಿe್ಞÁನದ ಇತಿಹಾಸಲ್ಲಿ ಒಂದು ಪ್ರಮುಖ ಮೈಲುಗಲ್ಲು. ಈ ಆವಿಷ್ಕಾರಕ್ಕಾಗಿ ಯುರೀಗೆ 1934ರ ನೊಬೆಲ್ ಪಾರಿತೋಷಕ ನೀಡಿ ಪುರಸ್ಕರಿಸಲಾಯಿತು. ಪ್ರಶಸ್ತಿವಿಜೇತ ವಿe್ಞÁನಿಗಳು ಉನ್ನತ ಸಮಿತಿಯ ಮುಂದೆ ತಮ್ಮ ಪರಿಶೋಧನೆಯನ್ನು ಕುರಿತು ಭಾಷಣ ಮಾಡುವುದು ಸಂಪ್ರದಾಯವಾಗಿತ್ತು. ಆದರೆ ಆ ವರ್ಷ ಯುರೀ ತನ್ನ ನೊಬೇಲ್ ಉಪನ್ಯಾಸ ನೀಡಲಿಲ್ಲ. ತನ್ನ ಹೆಂಡತಿ ಗರ್ಭಿಣಿಯಾಗಿರುವುದರಿಂದ ಸ್ವೀಡನ್ನಿಗೆ ಬರಲು ಸಾಧ್ಯವಿಲ್ಲವೆಂದು ನಿರಾಕರಿಸಿದನಂತೆ. ಅದಕ್ಕಾಗಿ ನೊಬೆಲ್ ಸಮಿತಿ ಇವನಿಗೆ ವಿಶೇಷ ವಿನಾಯಿತಿ ನೀಡಿ ಮೂರನೆಯ ವರ್ಷ ಭಾಷಣ ಮಾಡಲು ಅನುಮತಿ ಕೊಟ್ಟಿತು. 

ಐಸೊಟೋಪುಗಳು ರಾಸಾಯನಿಕವಾಗಿ ಒಂದೆ ತೆರನಾಗಿದ್ದರೂ ತೂಕ, ಸಾಂದ್ರತೆ, ವ್ಯಾಪಕತ್ವವೇಗ ಮುಂತಾದ ಭೌತಲಕ್ಷಣಗಳಲ್ಲಿ ಭಿನ್ನ. ಈ ಆಧಾರದ ಮೇಲೆ ಅವನ್ನು ಬೇರ್ಪಡಿಸುವುದು ಸಾಧ್ಯವೆಂದು ಯುರೀಗೆ ತೋಚಿತು. ಒಂದೇ ಧಾತುವಿನ ಹಗುರ ಪರಮಾಣುಗಳು ಅದರ ಭಾರ ಪರಮಾಣುಗಳಿಗಿಂತಲೂ ಹೆಚ್ಚು ಕ್ರಿಯಾಶೀಲವಾಗಿರುವುದು ಸ್ವಾಭಾವಿಕ. ಈ ತತ್ತ್ವವನ್ನು ಆಧರಿಸಿ ಯುರೀ ಕಾರ್ಬನ್-13 ಮತ್ತು ನೈಟ್ರೊಜನ್-15 ಐಸೊಟೋಪುಗಳನ್ನು ತಯಾರಿಸಿದ. ಯುರೀ ನಿರೂಪಿಸಿದ ವಿಧಾನಗಳನ್ನು ವಿಸ್ತರಿಸಿ ಪರಮಾಣು ಬಾಂಬ್‍ನ ತಯಾರಿಕೆಗೆ ಅಗತ್ಯವಾದ ಯುರೇನಿಯಮ್ -235 ಐಸೋಟೋಪನ್ನು ಯುರೇನಿಯಮ್ -233 ಪರಮಾಣುಗಳಿಂದ ಬೇರ್ಪಡಿಸಲಾಯಿತು.

ಎರಡನೆಯ ಮಹಾಯುದ್ಧದ ಬಳಿಕ ಡ್ಯೂಟೀರಿಯಮ್ ಬಳಸಿ ಭಯಂಕರ ಹೈಡ್ರೊಜನ್ ಬಾಂಬ್ ತಯಾರಿಸಲಾಯಿತೆಂಬುದನ್ನು ಇಲ್ಲಿ ಸ್ಮರಿಸಬಹುದು. ತನ್ನ ಐಸೋಟೋಪ್ ಸಂಶೋಧನೆಗಳು ಮಾನವಕುಲಕ್ಕೆ ಮಾರಕ ಎನಿಸುವ ನೂಕ್ಲಿಯರ್ ಅಸ್ತ್ರಗಳ ತಯಾರಿಕೆಗೆ ನಾಂದಿಯಾದುದನ್ನು ಮನಗೊಂಡು ನೊಂದ ಯುರೀ ರಸಾಯನ ವಿe್ಞÁನಕ್ಕೆ ವಿದಾಯ ಹೇಳಿ ಭೂಭೌತವಿe್ಞÁನ ಕ್ಷೇತ್ರವನ್ನು ಪ್ರವೇಶಿಸಿದ. ಇಲ್ಲೂ ಐಸೊಟೋಪನ್ನು ಕುರಿತ ಇವನ ಮೂಲ ಸಂಶೋಧನೆ ಉಪಯುಕ್ತವೆನಿಸಿತು. ಹಗುರ ಐಸೊಟೋಪ್ ತನ್ನ ಭಾರ ಐಸೊಟೋಪಿಗಿಂತಲೂ ಹೆಚ್ಚು ಕ್ರಿಯಾಶೀಲವಷ್ಟೆ. ಅದರ ಪಟುತ್ವ ಉಷ್ಣತೆಗೆ ಅನುಗುಣವಾಗಿ ವ್ಯತ್ಯಾಸವಾಗುವುದು ಕಂಡುಬಂದಿದೆ. ಉದಾಹರಣೆಗೆ ಒಂದು ಕಡಲಚಿಪ್ಪು ಸಮುದ್ರದ ಆಳದಲ್ಲಿ ರೂಪುಗೊಳ್ಳುವಾಗ ಅಲ್ಲಿ ಲಭ್ಯ ಇರುವ ಉಷ್ಣತೆಗೆ ಅನುಗುಣವಾಗಿ ಚಿಪ್ಪಿನಲ್ಲಿರುವ ಆಕ್ಸಿಜನ್ ಐಸೋಟೋಪುಗಳ ಪ್ರಮಾಣದಲ್ಲೂ ವ್ಯತ್ಯಾಸ ಕಂಡುಬರುತ್ತದೆ. ಇದನ್ನು ಗಮನಿಸಿ ಯುರೀ ಸಹೋದ್ಯೋಗಿಗಳು ಕಾಲಕ್ರಮದಲ್ಲಿ ಸಮುದ್ರದ ಆಳದಲ್ಲಿ ಉಂಟಾಗಿರುವ ಉಷ್ಣತಾ ಬದಲಾವಣೆಗಳ ಬಗೆಗೆ ದೀರ್ಘವರದಿಯನ್ನೇ ನೀಡಿದರು. 

ಈತ ಖಗೋಳವಿe್ಞÁನದಲ್ಲೂ ಆಸಕ್ತಿ ತಳೆದಿದ್ದ. ಇವನ ಪ್ರಕಾರ ಭೂಮಿ ಜನನ ಕಾಲದಲ್ಲಿ ಅಪಕರ್ಷಕ ವಾತಾವರಣ ಹೊಂದಿದ್ದು ಅದರಲ್ಲಿ ಹೈಡ್ರೊಜನ್, ಅಮೋನಿಯ ಮತ್ತು ಮೀಥೇನ್‍ಗಳ ಅಂಶ ಹೆಚ್ಚಾಗಿತ್ತು. ಕಾಲಕ್ರಮದಲ್ಲಿ ಈ ಅಂಶ ವ್ಯತ್ಯಾಸಗೊಂಡು ಜೀವವಿಕಾಸಕ್ಕೆ ಅನುಕೂಲವಾದ ಈಗಿನ ವಾತಾವರಣ ಸೃಷ್ಟಿಯಾಗಿದೆ. ಬ್ರಹ್ಮಾಂಡದಲ್ಲಿರುವ ಇತರ ದೈತ್ಯ ಗ್ರಹಗಳಲ್ಲಿ ಈಗ ಇರುವುದು ಅಂಥ ಅಪಕರ್ಷಕ ವಾತಾವರಣವೇ. ಆದ್ದರಿಂದ ಅಲ್ಲೂ ಕಾಲಕ್ರಮದಲ್ಲಿ ಜೀವ ವಿಕಾಸವಾಗಲೇ ಬೇಕು. ಬ್ರಹ್ಮಾಂಡದಲ್ಲಿ ಬೇರೆ ಬೇರೆ ಅe್ಞÁತ ಗ್ರಹಗಳಿರಬಹುದು. ಅಲ್ಲಿಯ ಜೀವವಿಕಾಸ ಭೂಮಿಗಿಂತಲೂ ಬಲು ಉನ್ನತ ತರವಾಗಿದ್ದು ಮನುಷ್ಯರಿಗಿಂತ ಬುದ್ಧಿಶಾಲಿಗಳಾದ ಜೀವಿಗಳಿರುವ ಸಾಧ್ಯತೆಯಿದೆ ಎಂಬ ಅಭಿಪ್ರಾಯವನ್ನು ಯುರೀ ತಳೆದಿದ್ದ. ಅಮೆರಿಕದ ರಸಾಯನ ವಿe್ಞÁನಿ ಸ್ಟ್ಯಾನ್ಲೀ ಲಾಯ್ಡ್ ಮಿಲ್ಲರ್ ಎಂಬವ ಈ ತತ್ಸಂಬಂಧವಾದ ಕ್ರಾಂತಿಕಾರಕ ಪ್ರಯೋಗಗಳನ್ನು ನಡೆಸಿದ್ದು ಯುರೀ ಪ್ರಯೋಗಶಾಲೆಯಲ್ಲಿ ಎಂಬುದು ಉಲ್ಲೇಖಾರ್ಹ. 
(ಹೆಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ